ಈ ಸ್ಥಳ ವಿದೇಶದಲ್ಲಿದ್ದರೆ ಪ್ರತಿಯೊಬ್ಬ ಭಾರತೀಯನೂ ಇದನ್ನು ಹೊಗಳಲು ಸುಸ್ತಾಗುತ್ತಿರಲಿಲ್ಲ…
Sajjangarh Fort
ಕೆಲವರು ಅದನ್ನು ಅದ್ಬುತವೆನ್ನುತ್ತಾರೆ ಮತ್ತು ಕೆಲವರು ವಿಚಿತ್ರವೆನ್ನುತ್ತಾರೆ. ಆದರೆ ಈ ಸ್ಥಳವು ಭಾರತದಲ್ಲಿದೆ, ಆದ್ದರಿಂದ ಅದೇ ವಿಷಯವು ನಮ್ಮವರಿಗೆ ಮಾಮೂಲಿಯಾಗಿರುತ್ತದೆ.
ಸಜ್ಜನಗಢ ಅರಮನೆ ಉದಯಪುರ
ಮೇವಾರ್ ರಾಜ ಮಹಾರಾಣಾ ಸಜ್ಜನ್ ಸಿಂಗ್ 1874 ಮತ್ತು 1884 ರ ನಡುವೆ ಉದಯಪುರ ನಗರದ ಪಶ್ಚಿಮದಲ್ಲಿರುವ ಬನ್ಸ್‌ದಾರ ಪರ್ವತದ ಮೇಲೆ ಈ ಕೋಟೆಯನ್ನು ನಿರ್ಮಿಸಿದನು. ಇದನ್ನು ಮಾನ್ಸೂನ್ ಪ್ಯಾಲೇಸ್ ಎಂದೂ ಕರೆಯುತ್ತಾರೆ. ಸಜ್ಜನಗಢವು ಸಮುದ್ರ ಮಟ್ಟದಿಂದ 3100 ಅಡಿ ಎತ್ತರದಲ್ಲಿದೆ. ಮಾನ್ಸೂನ್ ಮೋಡಗಳನ್ನು ನೋಡಲು ವಿಶೇಷವಾಗಿ ನಿರ್ಮಿಸಲಾದ ಇದಕ್ಕಿಂತ ಎತ್ತರದ ಕಟ್ಟಡ ನಗರದಲ್ಲಿ ಇಲ್ಲ. ಇದು 134 ವರ್ಷಗಳಷ್ಟು ಹಳೆಯದು.