ಎಲ್ಲರೊಳಗೊಬ್ಬ ಸಾಹಿತಿ ಇರುತ್ತಾನೆ..

0
166
There is literature inside everyone.

ಎಲ್ಲರೊಳಗೊಬ್ಬ ಸಾಹಿತಿ ಇರುತ್ತಾನೆ. ಹೌದು, ನಿಜವಾಗಿಯೂ ಎಲ್ಲರ ಒಳಗೂ ಒಬ್ಬ ಬರಹಗಾರ ಅಡಗಿರುತ್ತಾನೆ. ಅದು ಹೊರ ಬರಲು ಸೂಕ್ತ ಅವಕಾಶದ ಅಗತ್ಯವಿರುತ್ತದೆ.

ಒಂದು ವೇಳೆ  ಅವಕಾಶ ಸಿಗದಿದ್ದರೆ ಅದು ಗುಪ್ತ ಗಾಮಿನಿ ನದಿಯಂತೆ ಯಾರ ಕಣ್ಣಿಗೂ ಕಾಣ ಸಿಗದು. ಅದು ಸರಿಯಾದ ಅವಕಾಶ ದೊರಕಿ ಸಹಜವಾಗಿ ಹರಿದು ಬರಬೇಕು. ಮಗುವಿನಲ್ಲಿ ಅಡಕವಾಗಿರುವ ಯಾವುದೇ ವಿಶಿಷ್ಟ ಪ್ರತಿಭೆಯನ್ನು ಗುರುತಿಸುವಲ್ಲಿ ಪಾಲಕರ ಮತ್ತು ಗುರುಗಳ ಪಾಲು ಹೆಚ್ಚಿನದಾಗಿರುತ್ತೆ.

ಈ ಗುರುತಿಸುವಿಕೆ ಸರಿಯಾದ ನಿಟ್ಟಿನಲ್ಲಿ ಸಾಗಿದರೆ ಮುಗುವಿನ ಬಾಳದಾರಿಗೆ ಸರಿಯಾದ ಬೆಳಕು ಚೆಲ್ಲ ಬಹುದಾಗಿದೆ. ಆದ್ದರಿಂದ ಮಗು ಯಾವ ದಾರಿಯನ್ನು ಇಷ್ಟ ಪಡುತ್ತದೆ ಎಂಬುದನ್ನು ಗುರುತಿಸುವುದು ಮುಖ್ಯ.

ಉದಾಹರಣೆಗೆ ಬರಹ ಗಾರನಾಗುವುದಾದರೆ ಬರವಣಿಗೆಯ ಮೇಲೆ ಆಸಕ್ತಿ, ಪ್ರೀತಿ ಇರಬೇಕು.ಅಂತರಾಳದಲ್ಲಿ ಅವರು ಬರವಣಿಗೆಯನ್ನು ಪ್ರೀತಿಸುವವರಾಗ ಬೇಕು. ಬರವಣಿಗೆಯ ಫಲಕ್ಕಿಂತ ಅವರು ಬರೆಯುದನ್ನು ಅತ್ಯಂತ ಇಷ್ಟ ಪಡುವವರಾಗ ಬೇಕು. ನಾವು ಬರೆದದ್ದು ನಮಗೆ ತೃಪ್ತಿ ಕೊಟ್ಟರೆ ಸಾಲದು, ಅದು ಸಹೃದಯ ಓದುಗರಿರೂ ಕುಶಿ ಕೊಡುವಂತಿರ ಬೇಕು. ಅದರ ಹಿಂದೆ ಬರಹಗಾರನ ಅಪಾರ ಅನುಭವ, ಓದು ಮತ್ತು ಶ್ರಮ ಅಡಗಿರುತ್ತದೆ. ಸಾಹಿತಿ ಯಾದವನು ಸಾಕಷ್ಟು ಓದಿ ಕೊಂಡಿರ ಬೇಕಾಗಿರುತ್ತದೆ.

ಬರಹದಲ್ಲಿ ಆಸಕ್ತಿಯಿದ್ದವನಿಗೆ ಒಂದಿಷ್ಟು ಅವಕಾಶ ಸಿಕ್ಕಿದರೂ ಅವನು ಅದನ್ನು ಬೆಳೆಸಿಕೊಂಡು ಹೋಗುತ್ತಾನೆ. ಮುಂದೆ ಬರಹ ತನಗೆ ಅನಿವಾರ್ಯ ಎಂದು ಅವನಿಗೆ ಅರಿವಾಗಿ ಅವನು ಅಥವಾ ಅವಳು ಈ ದಿಶೆಯಲ್ಲಿ ಮುಂದುವರಿಯುತ್ತಾರೆ.  ಬರವಣಿಗೆ ಒಂದು ವರ. ಓದು ಸತತ ಪ್ರಯತ್ನ ಅದರ ಮೇಲೆ ಪ್ರಭಾವ ಬೀರ ಬಹುದಾದರೂ ಬರವಣಿಗೆಯ ಮೇಲಿನ ಪ್ರೀತಿ ಅಂತರ್ಗತವಾಗಿ ಹೊರ ಹೊಮ್ಮಬೇಕು.

ಬರಹಗಾರರಾಗುವುದು ಅಷ್ಟು ಸುಲಭ ಸಾಧ್ಯವಲ್ಲ. ಸುಲಭವಾಗಿದ್ದರೆ ಎಲ್ಲರೂ ಲೇಖಕ, ಕವಿಗಳಾಗುತ್ತಿದ್ದರು. ಹೆಚ್ಚಿನ ಎಲ್ಲರಲ್ಲೂ ಆ ಶಕ್ತಿ ಇದ್ದರೂ ಅದು ಸಾಗುವ ದಾರಿಯ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಕನಸುಗಳು ಜನ್ಮ ತಾಳೋದು ಜಾಗೃತ ಮನಸ್ಸಿನಲ್ಲಿ ಆದರೂ ಅದು ವಿಕಸಿತ ಗೊಳ್ಳೋದು ಸುಪ್ತ ಮನಸ್ಸಿನಲ್ಲಿ. ಜಾಗೃತ ಮನಸಿನ ದೃಢ ನಿರ್ಧಾರಗಳನ್ನು ಸುಪ್ತ ಮನಸ್ಸಿಗೆ ಕಾಳಜಿ ಪೂರ್ವಕವಾಗಿ ಮತ್ತು ವ್ಯವಸ್ಥಿತ ವಾಗಿ ದಾಟಿಸಿದರೆ ಅದು ಅಲ್ಲಿ ಗಟ್ಟಗೊಳ್ಳುತ್ತದೆ.

ಮಾನವ ಏನೇ ಆಗಬೇಕಿದ್ದರೂ ಅವನ ಹುಟ್ಟು ಅವನು ಬೆಳೆಯುವ ಪರಿಸರ ಅಷ್ಟೇ ಮುಖ್ಯವಾಗಿರುತ್ತದೆ. ಜೊತೆಗೆ ಶ್ರಮವೂ ಅಷ್ಟೇ ಮುಖ್ಯವಾಗಿರುತ್ತದೆ. ಬರಹಗಾರ ನಾಗಲಿ, ಚಿತ್ರಗಾರ ನಾಗಲಿ ಅದಕ್ಕೆ ಹಿನ್ನಲೆ ಮತ್ತು ಶ್ರಮ ದ ಆಗತ್ಯ ಇದ್ದೇ ಇರುತ್ತದೆ.

ಕನಸು ಮತ್ತು ಸಾಧನೆ ಇದನ್ನು ಯಾರು, ಯಾವಾಗ ಬೇಕಾದರೂ ಪ್ರಾರಂಭಿಸ ಬಹುದು. ಆದರೆ ಅದಕ್ಕೆ ಅಷ್ಟೇ ಗಟ್ಟಿ ನಿರ್ಧಾರ ಬೇಕಾಗುತ್ತದೆ. ಸರಿಯಾಗಿದ್ದಲ್ಲಿ ಈ ಕ್ಷಣದಿಂದ ಸ್ವಪ್ನಗಳ ಹುಡುಕಾಟದ ಜೊತೆಗೆ ಅದನ್ನು ನನಸು ಮಾಡುವ ನಿಟ್ಟಿನಲ್ಲಿ ತೊಡಗೋಣ. ಬರಹಗಾರ ಅಥವಾ ಚಿತ್ರಕಾರ ಏನೇ ಆಗಲಿ ಬದುಕಿಗೊಂದು ಲಕ್ಷ್ಯ ಇರಲಿ.

ಲೇಖಕರು: ಕರುಣಾಕರ  ಎನ್  ಶೆಟ್ಟಿ ಪಣಿಯೂರು.

 

LEAVE A REPLY

Please enter your comment!
Please enter your name here