ಕುಡಿತ ಎಂಬ ಮಾಯೆ, ಅದರ ಮೋಹ..

0
157
drinking alcohol a magic

ಇಂದು ಕುಡಿಯದವರು ಯಾರಿದ್ದಾರೆ ಹೇಳಿ , ಇದು ಎಲ್ಲರ ಬಾಯಲ್ಲೂ ಸರ್ವೇ ಸಾಮಾನ್ಯ ವಾದ ಮಾತು.

ಆದರೆ ಕುಡಿಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬುದು ಅವರಿಗೆ ಗೊತ್ತೀರುವುದಿಲ್ಲ.ಏಕೆಂದರೆ ಈ ಕುಡಿದವರ ಆರ್ಭಟ ದ ಮುಂದೆ,  ಕುಡಿಯದವರ  ಮೌನ  ಯಾರಿಗೂ ಕಾಣಿಸುವುದೇ ಇಲ್ಲ.

ಇದು ಅವರ ತಪ್ಪಂತೂ ಖಂಡಿತ ಅಲ್ಲ. ಇದನ್ನು ಸಮಾಜ ಮನಗಾಣಬೇಕಷ್ಟೆ. ಇಂದು ಕುಡಿತ ಎಂಬುದು ಒಂದು ಫ್ಯಾಷನ್ ಆಗಿ ಬಿಟ್ಟಿದೆ.

ಈ ಸಮಾಜದಲ್ಲಿ ಕುಡಿಯದವನಿಗೆ ಪ್ರೇಸ್ಟೇಜ್  ಇಲ್ಲ ಎಂಬುದು ಕೆಲವರ ಅನಿಸಿಕೆ ಹಾಗು ಅಭಿಮತ.

ಹಾಗಾಗಿ ಈ ಪ್ರೇಸ್ಟೇಜ್ ಉಳಿಸಿ ಕೊಳ್ಳಲು  ಕೆಲವರು ತಮಗೆ ಇಷ್ಟವಾಗಿಲ್ಲ ವಾದರೂ ಸ್ವಲ್ಪ ಸ್ವಲ್ಪ ವಾಗಿ ಅಭ್ಯಾಸ ಮಾಡತೊಡಗುತ್ತಾರೆ. ಸ್ವಲ್ಪ ಸಮಯದ ನಂತರ ಅದೇ ಅವರನ್ನು ಅಪೊಶನಗೊಳ್ಳುತ್ತದೆ .ಅದು ಬೇರೆ ಮಾತು

ಶುರುವಿನಲ್ಲಿ ಕೇವಲ ಒಂದು ಬೀಯರ್ , ಏನಾಗುವುದಿಲ್ಲ *ಕುಡಿ‌*, ಇದು ಕೆಲವರ ಪ್ರೋತ್ಸಾಹದ *ನುಡಿ*

ಅರೆ , ಏನೂ ಆಗದಿದ್ದರೆ ಮತ್ಯಾಕೆ  ಕುಡಿಯುವುದು  ಇದು   ನನ್ನ  ಪ್ರಶ್ನೆ. ಬೀಯರ್ ನಿಂದ ಪ್ರಾರಂಭ ವಾದವರು  ನಂತರ  ವಿಸ್ಕಿ , ವೈನ್ , ವೊಡ್ಕ ದೆಡೆಗೆ ಸಾಗುತ್ತಾರೆ. ಸಾಗುತ್ತಾರೆ ಅನ್ನುವುದಕ್ಕಿಂತ ಅದು ಅವರನ್ನು ಕೊಂಡೋಯ್ಯುತ್ತದೆ ಎನ್ನುವುದು ಸೂಕ್ತ. ಬೀಚಿ ಅವರು ಅಂದಂತೆ ಕೆಲವಾರು ಹೆಂಡತಿ ಇಲ್ಲ ಎಂದು ಕುಡಿಯುತ್ತಾರೆ,   ಇನ್ನು ಕೆಲವರು ಹೆಂಡತಿ ಯ ಕಾಟ ತಾಳಲಾರದೇ  ಕುಡಿಯುತ್ತಾರೆ.

*ಥರ್ಟಿ ಫಸ್ಟ್* ನ್ನು ರಾಷ್ಟ್ರೀಯ ಹಬ್ಬ ಎಂಬಂತೆ ಆಚರಿಸುವವರಿದ್ದಾರೆ. ಅವರಿಗೆ  ದೀಪಾವಳಿ, ಕ್ರಿಸ್ಮಸ್ , ರಂಜಾನ್ ಯಾವುದೂ ಇಷ್ಟು ಮುಖ್ಯವಲ್ಲ. ಅದಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಾರೆ.

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವವರು ಕೂಡ ಸ್ವಲ್ಪ ದಿನದ ಮುಂಚೆ ಯೇ ಹಣ  ಜಮ ಮಾಡುವುದನ್ನು ನಾನು ನೋಡಿದ್ದೇನೆ.

( ನಾವು  ಚಿಕ್ಕವರಿದ್ದಾಗ ಪಟಾಕಿ ತರಲು ಹಣ ಕೂಡಿಟ್ಟ ಹಾಗೆ )
ಡಿಸೆಂಬರ್ 31 ರಂದು ಅವರು ಬೇಕಾದಷ್ಟು  ಕುಡಿಯುತ್ತಾರೆ.
ನಾಳೆ ಯಿಂದ ಯಾವುದೇ ರೀತಿಯ ಡ್ರಿಂಕ್ಸ್ ಇಲ್ಲ  ಎನ್ನುವ ತರಹ…..
ಆದರೆ ಜನವರಿ 1 ರಂದು ಅವರು ಪುನಃ ಕುಡಿಯುತ್ತಾರೆ ಮಾಮುಲಿನ ತರಹ…
ಹಾಗಾದರೆ ಡಿಸೆಂಬರ್ 31ರ ಮದ್ಯದ ಮಹತ್ವ ವೇನು..,,?
ಆ ದಿನ ಅದರಲ್ಲಿ ಅಮ್ರತವೇನಾದರೂ  ಹಾಕಿ ಕೊಡುತ್ತಾರೆ ಯೇ…?
ಇದು ನನಗೆ ಇಷ್ಟ ವರೆಗೆ ಯಕ್ಷ ಪ್ರಶ್ನೆ ಯಾಗಿಯೇ ಉಳಿದಿದೆ.

ಇದರ ಬಗ್ಗೆ ನನ್ನ ಗೆಳೆಯ ನೊಬ್ಬನಲ್ಲಿ ವಿಚಾರಿಸಿದಾಗ ಆತನೆಂದ ಇದು ಹೇಳಲಾರದ ಗುಟ್ಟು .   ಆ ದಿನ ಒಮ್ಮೆ ನೀನೂ ಕುಡಿದು ನೋಡು ….ಏನೂ ಆಗುವುದಿಲ್ಲ ಪುನಃ  ನಾನೆಂದೆ  , ಏನೂ ಆಗದಿದ್ದರೆ  ಅಥವ ಗೊತ್ತಾಗದಿದ್ದರೆ ಕುಡಿದೇನು  ಪ್ರಯೋಜನ..? ಹೀಗಾಗಿ ಆ ಪ್ರಯತ್ನ ವನ್ನು ನಾನು ಇಷ್ಟರವರೆಗೆ ಮಾಡಲಿಲ್ಲ.

ಕುಡಿದವರು  ಹೆಚ್ಚಾಗಿ ಇಂಗ್ಲಿಷ್ ಮಾತಾಡಲು ಕಾರಣವೇನು..? ಇದು ಇನ್ನೊಂದು ಪ್ರಶ್ನೆ…. ಅದಕ್ಕೆ ನನ್ನ ಗೆಳೆಯರೊಬ್ಬರ ಸಮಜಾಯಿಷಿ…..ಇಂಗ್ಲಿಷ್ ಮಾತಾಡುವವರು ದೊಡ್ಡ ವ್ಯಕ್ತಿ ಗಳು ಎಂಬುದು ಕೆಲವರ  ಅಭಿಪ್ರಾಯ.. ಅದು ಸರಿಯಾಗಿ ಬಾರದಿದ್ದರೆ ಬೇರೆ ಸಮಯದಲ್ಲಿ  ಮಾತಾಡಲು ಹಿಂಜರಿಕೆ…. ಆದರೆ  ಕುಡಿದಿರುವಾಗ  ಎಲ್ಲ ಬಲ್ಲ ಸರ್ವಜ್ಞ ನಾನೇ ಎಂಬ ಹುಂಬ ತನ.. ಹೀಗಾಗಿ  ಕುಡಿದಿರುವಾಗ  ಕೆಲವರು ಧೈರ್ಯ ದಿಂದ  ಇಂಗ್ಲಿಷ್ ಮಾತಾಡಲು ತೊಡಗುತ್ತಾರೆ…

ಜೋರಾಗಿ ಕುಡಿತದ  ಅಭ್ಯಾಸವಿದ್ದ  ಒಬ್ಬ ವ್ಯಕ್ತಿ ಈ ಕುಡಿತ ದಿಂದ ಪಾರಾಗಲು ದಾರಿ ಹುಡುಕುತ್ತಾ  ರಾಮಕೃಷ್ಣ ಪರಮಹಂಸರಲ್ಲಿಗೆ  ಹೊದನಂತೆ. ಅವನ ಕತೆ ಕೇಳಿದ ಮೇಲೆ ಅವರೆಂದರಂತೆ    ಆಯೀತು, ನಾಳೆ ಇದೆ ಹೊತ್ತಿಗೆ  ಬಾ…ನಿನ್ನ ಸಮಸ್ಯೆ ಗೊಂದು  ಪರಿಹಾರ ಹುಡುಕುವ ಎಂದು ಹೇಳಿ ಕಳುಹಿಸಿದರಂತೆ.

ಮರುದಿನ ಆ ವ್ಯಕ್ತಿ ಹೋದಾಗ ರಾಮಕೃಷ್ಣ ಪರಮಹಂಸರು ಒಂದು ಮರವನ್ನು ಗಟ್ಟಿ ಯಾಗಿ  ತಬ್ಬಿ ಕೊಂಡು ನಿಂತಿದ್ದರಂತೆ.

ಬಂದ ಆಗಂತುಕ  ಕೂಗಿ ಕರೆದರೂ ಕೇಳಿದೆ  ನಿಂತ ಅವರನ್ನು  ನೋಡಿ ಕೋಪದಿಂದ  ಹೊರಟುಹೋದ.

ಮಾರನೇ ದಿನ ಪುನಃ ಬಂದಾಗ  ಪರಮಹಂಸರು ಮರವನ್ನು ಗಟ್ಟಿ ಯಾಗಿ ತಬ್ಬಿ ಹಿಡಿದು ನಿಂತಿದ್ದ ನ್ನು ನೋಡಿ ಕೋಪಗೊಂಡ ಆತ  ನೀವ್ಯಾಕೆ ಮರವನ್ನು ತಬ್ಬಿ ಕೊಂಡಿದ್ದೀರಿ…?  ಎಂದು ಪ್ರಶ್ನಿಸಿದ.

ಆಗ ಪರಮಹಂಸರು  ಶಾಂತ ಚಿತ್ತರಾಗಿ  ಇಲ್ಲ  ಈ ಮರವು ನನ್ನನ್ನು ಬಿಡುತ್ತಿಲ್ಲ  ಏನು  ಮಾಡಬೇಕು ಎಂದು ಅವನನ್ನೇ   ಪ್ರಶ್ನಿ ಸಿದರಂತೆ ….ಆಗ ಆ ವ್ಯಕ್ತಿ ಸ್ವಾಮೀ…. ನೀವ್ಯಾಕೆ  ಸುಳ್ಳು  ಹೇಳುತ್ತಿದ್ದೀರಿ…

ಮರವು ನಿಮ್ಮನ್ನು ಎಲ್ಲಿ ಹಿಡಿದಿದೆ …? 

ನೀವೇ ಮರವನ್ನು ತಬ್ಬಿ ಕೊಂಡಿದ್ದೀರಿ… ಮೊದಲು ಬಿಡಿ ಅದನ್ನು  ಎಂದ.ಆಗ  ಈಚೆಗೆ ಬಂದ ಪರಮಹಂಸರು ನಸುನಗುತ್ತಾ  ಹೋಹೋ… ಹೌದೇ …. ಇಲ್ಲಿ ಮರವು ನನ್ನನ್ನು ಹಿಡಿದಿಲ್ಲ ವಾದರೆ…. ಅಲ್ಲಿ  ಕುಡಿತವು  ನಿನ್ನನ್ನು  ಹೇಗೆ ದಾಸನಾಗಿ ಮಾಡಲು ಸಾಧ್ಯ…? ಬಿಟ್ಟು ಬಿಡು ಅದನ್ನು…ಎಲ್ಲವೂ ನಿನ್ನ ಕೈ ಯಲ್ಲೇ ಇದೆ. ಎಂದು ಆತನ ಮನ ಪರಿವರ್ತಿಸಿ  ಕಳುಹಿಸಿ ದರಂತೆ.

ಕೆಲವರು ಹುಟ್ಟಿದ್ದಕ್ಕಾಗಿ ಬದುಕುತ್ತಾರೆ… ಇನ್ನು ಕೆಲವರು   ಬದುಕಿದ್ದಕ್ಕೆ  ಸಾರ್ಥಕ ವಾಗುವಂತಾ ಏನಾದರೂ ಕೆಲಸ ಮಾಡುತ್ತಾರೆ…… ಹಾಗೆ ಮಾಡಿದರೆ ಮಾತ್ರ  ಬದುಕಿಗೊಂದು ಅರ್ಥ.ಇಲ್ಲದಿದ್ದರೆ ಈ ರೀತಿ ಕುಡಿದು ತಿಂದು  ಕೊನೆಗೊಂದು  ದಿನ  ಸತ್ತರೆ ಏನು  ಫಲ ..?  ನಾಯಿ ಪಾಡು ಅಂತಾರಲ್ಲ  ಆ ರೀತಿ ಆಗುತ್ತದೆ …

ಹಾಗಾಗಬಾರದು ನಮ್ಮ ಜೀವನ …. ಮಾನವ ಜನ್ಮ ಪರಮ ಶ್ರೇಷ್ಠ ಎಂದು ತೋರಿಸಿ ಕೊಡಬೇಕು  ನಾವೆಲ್ಲಾ….. ಇಂತಹ   ದುಶ್ಚಟಗಳಿಗೆಲ್ಲಾ  ನಾವು  ಬಲಿಪಶುಗಳಾಗಬಾರದು…

✍️ ಸತೀಶ್ ಎಮ್ ಶೆಟ್ಟಿ ಪೆರ್ಡೂರು.

ಮುಂದೆ ಓದಿ :

ವೈಯಕ್ತಿಕ ಅಭಿವೃದ್ಧಿ ಎಂದರೇನು?

ತಾಳ್ಮೆ ಏಕೆ ಮುಖ್ಯ? ತಾಳ್ಮೆಯ ವ್ಯಾಖ್ಯಾನ

ಆತ್ಮವಿಶ್ವಾಸವನ್ನು ಹೊರಹಾಕುವುದು ಹೇಗೆ

ನಿಮ್ಮ ಮನಸ್ಸನ್ನು ಆರೋಗ್ಯವಾಗಿರಿಸಿಕೊಳ್ಳುವುದು ಹೇಗೆ

ಹದಿಹರೆಯದವರಿಗೆ 7 ಉಚಿತ ಸಂಪನ್ಮೂಲಗಳು ಆತ್ಮವಿಶ್ವಾಸವನ್ನು ಮರುಸ್ಥಾಪಿಸಲು ಮತ್ತು ಅವರ ಭವಿಷ್ಯದ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ

ನ್ಯಾಯ ಮತ್ತು ಒಳ್ಳೆಯತನದ ನಡುವಿನ ಹೊಂದಾಣಿಕೆ

 

 

 

 

 

 

 

 

LEAVE A REPLY

Please enter your comment!
Please enter your name here