ಆತ್ಮೀಯತೇ ಒಂದು ಸಂಜೀವಿನಿ ಅದು ಅಮೃತ ಸಿಂಚನ.

0
256
ಮಾನವ ಸಂಘಜೀವಿ , ಸ್ನೇಹ ಜೀವಿ ಏಕಾಂಗಿಯಾಗಿ ಬಾಳಲಾರ  ಇಷ್ಟ ಮಿತ್ರರಿಲ್ಲದೆ ದಿನ ದೂಡಲಾರ. ಜೀವನದ ಯಾಂತ್ರಿಕತೆ ,ಜಡತ್ವ  ಅಪರಿಪೂರ್ಣತೆ  ಮತ್ತು ಕ್ಲೇಶಗಳಿಂದ  ಬಿಡುಗಡೆ ಪಡೆಯಲು ಪ್ರೀತಿಯ ಧಾರೆ ತುಂಬಿರುವ ಆತ್ಮೀಯರ ಹಿತನುಡಿ ಬದುಕು ಸಾಗಿಸಲು ಸುಲಭ ಮಾರ್ಗದರ್ಶನವೂ ಹೌದು.

Dearness is a Sanjeevini.

ಕಷ್ಟ ಸುಖಗಳಲ್ಲಿ ಭಾಗಿಯಾಗಿ , ನೋವು ನಲಿವುಗಳನ್ನು ಜೊತೆಯಾಗಿ ಹಂಚಿಕೊಂಡು ಜೀವನದಲ್ಲಿ ಸಾಕಷ್ಟು ಕಾಲ  ತುಂಬು ಆಪ್ತರಾಗಿ ಸದಾ ಪ್ರೀತಿ ವಿಶ್ವಾಸ ತೋರಿಸುವ ಆತ್ಮೀಯರು ಮನಸ್ಸಿಗೆ  ಬಹು ಹತ್ತಿರವಾಗಿರುತ್ತಾರೆ.  ‌ಕೆಲವರೊಂದಿಗೆ ಮಾತನಾಡಿದಾಗ ಯಾಕೋ ತುಂಬಾ ಸಂತೋಷ, ಮನಸ್ಸಿಗೆ ಹಿತ, ಉಲ್ಲಾಸವೆನಿಸುತ್ತದೆ. ಅಂತಹ ಸಂಬಂಧಗಳು ಜೀವನದಲ್ಲಿ ಸಿಗುವುದು ಬಹಳ ವಿರಳ ಸಿಕ್ಕಾಗ ಅದರ ಘನತೆ ಉಳಿಸಿಕೊಳ್ಳಬೇಕು.

ನಾವು ಅಸಂಖ್ಯಾತ ಜನರನ್ನು ಬೇಟಿಯಾಗುತ್ತೆ ವೆ. ಅದರಲ್ಲಿ ಹೆಚ್ಚಿನವರು ಅಪರಿಚಿತರಾಗಿಯೇ ಉಳಿ ಯುತ್ತಾರೆ. ಇನ್ನೂ ಕೆಲವರು ಪರಿಚಯದವರಾಗಿ ” ನಮಸ್ಕಾರ, ಚನ್ನಾಗಿದ್ದೀರಾ” ಎಂದು ವಿಚಾರಿಸುವಷ್ಟೇ ಹತ್ತಿರವಾಗುತ್ತಾರೆ. ಈ ಸೇಹಿತರಲ್ಲಿ ಕೆಲವೇ ಕೆಲವರು ಮಾತ್ರ ಆಪ್ತರಾಗಿ  ಆತ್ಮೀಯರಾಗುತ್ತಾರೆ‌ . ಆತ್ಮೀಯತೆ  ಮೂಡಲು ವಯಸ್ಸು, ಹೆಣ್ಣು ಗಂಡು, ಜಾತಿ, ಧರ್ಮ, ಅಧಿಕಾರ , ಅಂತಸ್ತು,ಕಾಲ, ಸ್ಥಳ ಯಾವುದು ಅಡ್ಡಿ ಬರುವುದಿಲ್ಲ.

ನಿಜವಾದ ಆತ್ಮೀಯರು ಕಷ್ಟದ ವೇಳೆ ಆಸರೆಯಾಗಿ ನೇರವಾಗಲು ನಮ್ಮೊಂದಿಗೆ ಸಹಕರಿಸುತ್ತಾ ಒಳ್ಳೆಯ ಮಾರ್ಗದರ್ಶನ ನೀಡುತ್ತಾರೆ.  ಆತ್ಮೀಯತೆ ಬಹಳ ಮಧುರವಾದ ಭಾವನೆ .ಅದರ ಮುಖ್ಯ ಗುಣವೆಂದರೆ ಹಂಚಿಕೊಳ್ಳುವುದು ,ಭಾಗಿಯಾಗುವುದು,ಇಲ್ಲಿ ಕೊಡುವು ದು ತೆಗೆದು ಕೊಳ್ಳುವುದು ಮುಖ್ಯವಲ್ಲ.

ಸಫಲತೆ ಇರಲಿ, ವಿಫಲತೆ ಇರಲಿ ,ಆಶೆ -ನಿರಾಶೆಗಳಲ್ಲೂ, ಉತ್ಸಾಹವಿರಲಿ ಉದಾಸೀನವಿರಲಿ  ಶ್ರೀಮಂತಿಕೆ ಅಥವಾ ಬಡತನದಲ್ಲೂ  ಅನಿಸಿಕೆ ಅನುಭವಗಳನ್ನು ಕಷ್ಟಸುಖ, ನೋವು ‌ನಲಿವುಗಳನ್ನು‌ ಹಂಚಿಕೊಳ್ಳುವುದು, ಪರಸ್ಪರರಿಗೆ ಆಸರೆಯಾಗುವುದು ಆತ್ಮೀಯತೆಯ  ಪ್ರಮುಖ ಲಕ್ಷಣ.

ತನ್ನಂತರಂಗದ ಆಸೆ – ಆಕಾಂಕ್ಷೆಗಳನ್ನು, ಅನಿಸಿಕೆ, ಭಾವನೆ ವಿಚಾರಗಳನ್ನು ಹಂಚಿಕೊಳ್ಳುತ್ತಾ ಜೀವನದಲ್ಲಿ ಸ್ಪೂರ್ತಿ, ಆಕಾಂಕ್ಷೆ, ಧ್ಯೆರ್ಯ ತುಂಬಿಸಿ ಬದುಕನ್ನು ಭದ್ರತೆ ಎಡೆಗೆ ಕೊಂಡೊಯ್ಯುವ ಆತ್ಮೀಯರು ದೊರೆತಾಗ ಅನೇಕ ಕನಸು ನನಸಾದಿತು. ಸಂಬಂಧ- ಸಂಬಂಧಗಳ ನಡುವೆ ಮಧುರತೆ ಇದ್ದು ಅನ್ಯೋನ್ಯತೆ ,ಸ್ನೇಹ ಭಾವ ಹೃದಯ ದಲ್ಲಿ ಇದ್ದಾಗ  ಭಾವನೆಗಳನ್ನು ಗುರುತಿಸಿ ಅನುಭವಿಸುವ ಸಹೃದಯತೆಯೊಂದಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗ  ಆತ್ಮೀಯತೆ ಬಾಂಧವ್ಯ ಗಟ್ಟಿ ಗೊಳ್ಳುವುದು.

ನಾವು ಏನನ್ನಾದರೂ ಸಾಧಿಸಿದಾಗ ಯಶಸ್ಸು ಪಡೆದಾಗ, ಸುಖ ಸಂತೋಷ ಪಟ್ಟಾಗ ಆಪ್ತರೊಂದಿಗೆ ಅದನ್ನು ಹಂಚಿ ಕೊಳ್ಳಲು ಹಾತೊರೆಯುತ್ತೆವೆ. ಆತ್ಮೀಯ ರ ಅನುಕಂಪ, ಸಹಾನುಭೂತಿ, ಆಸರೆ, ಪ್ರೋತ್ಸಾಹ ಪ್ರೀತಿ ವಿಶ್ವಾಸದಿಂದ ನೊಂದ ಬೆಂದ ಮನಸ್ಸಿಗೆ ಅಮೃತ ಸಿಂಚನ ವಾಗುತ್ತದೆ. ಕೆಲವೊಮ್ಮೆ ಆತ್ಮೀಯರ ನಡುವೆ ಮೊಳೆವ ಕಳೆಯನ್ನು ಪ್ರಾರಂಭದಲ್ಲಿ ತೆಗೆದು ಹಾಕದೆ ಹೋದರೆ ಅವು ಜೀವನ ಸೌಂದರ್ಯವನ್ನು ಹಾಳುಗೆಡವುತ್ತದೆ. ಆ ನಿಟ್ಟಿನಲ್ಲಿ ಎಚ್ಚರಿಕೆ ಅಗತ್ಯ.

ಆತ್ಮೀಯಯರೊಂದಿಗೆ ಸುಖವನ್ನು ಹಂಚಿಕೊಂಡ ಷ್ಟೂ ಅದು ಹೆಚ್ಚುತ್ತದೆ ದುಃಖ ಹಂಚಿಕೊಂಡಷ್ಟೂ ಕಡಿಮೆ ಆಗುತ್ತದೆ. ಕಷ್ಟ ನಷ್ಟಗಳಿಗೆ, ನೋವು ನಿರಾಶೆಗಳಿಗೆ ಒಳಗಾದವರಿಗೆ ಆತ್ಮೀಯರು ಒಂದು ಸಂಜೀವಿನಿ ಯಾಗಿರುತ್ತಾರೆ. ಆತ್ಮೀಯರ ಎದುರು ಯಾವುದೇ ಮುಚ್ಚುಮರೆ ಇಲ್ಲದೆ ತೆರೆದಿಟ್ಟ ಪುಸ್ತಕವಾಗಬೇಕು.

ಮುಚ್ಚಿಡುವಿಕೆ, ಸಂಕೋಚ ವ್ಯಕ್ತಪಡಿಸುವಿಕೆ, ಅನಿಸಿದ್ದ ನ್ನು, ಅನುಭವಿಸಿದ್ದನ್ನು ಹಂಚಿಕೊಳ್ಳದಿರುವುದು ಆತ್ಮೀಯತೆ ಅಲ್ಲ. ಬದುಕು ಭಾವನೆಗಳ ನಡುವೆ ಆಗಿಂದಾಗ್ಗೆ ತಾತ್ಕಾಲಿಕವಾಗಿ ವ್ಯತ್ಯಾಸಗಳಾಗುತಿರುತ್ತದೆ. ಅದಕ್ಕಾಗಿ ನಿಸ್ಸಾಯಕತೆ ,ಅಸಹನೆಗೆ ಒಳಗಾಗದೆ ದೌರ್ಬಲ್ಯಗಳನ್ನು ಒಪ್ಪಿಕೊಂಡು ಬದುಕಿನ ರೀತಿ ನೀತಿ ಕಲಿಯಲು ಆತ್ಮೀಯರ ಸ್ಪೂರ್ತಿಯು ಅಗತ್ಯ.

ಸಾದ್ಯವಾದಗಲೆಲ್ಲ‌ ನಮ್ಮ ಆಲೋಚನೆ, ಭಾವನೆ, ಅನಿಸಿಕೆ, ಅನುಭವಗಳನ್ನು ಆಸೆ -ಆಕಾಂಕ್ಷೆಗಳನ್ನು ಚಟುವಟಿಕೆ ಉದ್ದೇಶಗಳನ್ನು ಬೇಸರ ಅಸಮಾಧಾನಗಳ ಬಿಡಿಸಿ ಚರ್ಚಿಸಬೇಕು. ತೆರೆದ ಮನಸ್ಸಿನ ಪ್ರತಿಕ್ರಿಯೆಗಳು, ಅನುಮಾನ, ಅಸಂಗತಗಳು ನಡೆದಾಗ ದುಡುಕದೆ ಸಹನೆಯಿಂದ‌ ಪರಿಸ್ಥಿತಿಯನ್ನು ವಿಶ್ಲೇಸುವುದರಿಂದ ಸಣ್ಣ ದೊಡ್ಡ ತಪ್ಪುಗಳು ಹಾಗೂ ಕೊರತೆಗಳನ್ನು ಕ್ಷಮಿಸುವುದರಿಂದ  ಆತ್ಮೀಯ  ಸಂಬಂಧಗಳು ಉಳಿಯುತ್ತದೆ. ಹೃದಯದಲ್ಲಿ ಅಮೂಲ್ಯ ಸ್ಥಾನ ಸಿಗುವುದು ಕೆಲವರಿಗೆ ಮಾತ್ರ .ಇದರ ಮಹತ್ವ ಅರಿತವನೇ ಜಾಣ .

 

‌ಲೇಖನ : ಲತಾ ಸಂತೋಷ ಶೆಟ್ಟಿ ಮುದ್ದುಮನೆ.

LEAVE A REPLY

Please enter your comment!
Please enter your name here