ಸಾಂಪ್ರದಾಯಿಕ ಶೈಲಿಯಲ್ಲಿ ಮದರಂಗಿ ಯ ಆಚರಣೆ.

0
162
ನಮ್ಮ ಸಮಾಜದಲ್ಲಿ ಮದುವೆ ಎಂಬುದು ಮಹತ್ವ ಪೂರ್ಣ ಸಂಸ್ಕಾರ. ಸ್ತ್ರೀ ಪುರುಷ ಶಕ್ತಿ ಗಳ ಸಮಾಗಮ. ಪ್ರಕ್ರತಿ , ಪುರುಷ ರ ಸಮಾಗಮದ ಶುಭ ಗಳಿಗೆ. ಹೀಗೆ ಪ್ರತಿಯೊಬ್ಬರ ಜೀವನದಲ್ಲಿಯೂ ಮದುವೆ ಎಂಬುದು ಬಲು ಮುಖ್ಯ ವಾದ ಘಟ್ಟ.

The ritual of ritual in the traditional style.

ಸಾಂಪ್ರದಾಯ ಬದ್ಧವಾಗಿ ಮದುವೆ ಯಾಗುವವರು ಮದರಂಗಿ ಕಾರ್ಯಕ್ರಮ ವಿಲ್ಲದೆ  ಮದುವೆ ಯಾಗುವುದು ಅತೀ ಕಡಿಮೆ ಎಂದೇ  ಹೇಳಬಹುದು.

ಮದುವೆ ಯಲ್ಲಿ ಮೂರು ಮುಖ್ಯ ವಿಧಿ ಗಳಿರುತ್ತವೆ.

1) ವಿವಾಹ ನಿಶ್ಚಿತಾರ್ಥ

2) ಮದರಂಗಿ ಕಾರ್ಯಕ್ರಮ

3) ಹಾರ ಬದಲಾವಣೆ

ಈಗ ನಾವು ಮದರಂಗಿ ಯ ಬಗ್ಗೆ ಹೇಳುವುದಾದರೆ ಈ ಕಾರ್ಯಕ್ರಮವನ್ನು ಎಲ್ಲರೂ ಇಷ್ಟಪಡುತ್ತಾರೆ.ಅನಾದಿ ಕಾಲದಿಂದಲೂ ಮದರಂಗಿ ಕಾರ್ಯಕ್ರಮ ಕ್ಕೆ ಅದರದ್ದೇ ಆದ ಮಹತ್ವವಿದೆ. ಹಬ್ಬ ಹರಿದಿನ, ಸಾಂಪ್ರದಾಯಿಕ  ಆಚರಣೆಗಳು, ಅಥವ ಇನ್ನಿತರ ಶುಭ ಸಮಾರಂಭಗಳಲ್ಲೂ ಮದರಂಗಿ ಇಡುತ್ತಾರೆ.

ಆದರೆ ಮದುವೆ ಸಮಾರಂಭ ದಲ್ಲಿ ನಡೆಯುವ ಮೆಹಂದಿ ಶಾಸ್ತ್ರ ಕ್ಕೆ ಹೆಚ್ಚಿನ ಮಹತ್ವ ವಿದೆ. ಹಿಂದೆ ಮದುವೆಯ ಹಿಂದಿನ ದಿನ ಬೆಳಿಗ್ಗೆ  ನಮ್ಮ ದೇ ಹಿತ್ತಲ ಗಿಡ ದಲ್ಲಿರುವ ಮದರಂಗಿ ಎಲೆ ಗಳನ್ನು  ಆರಿಸಿ , ತೊಳೆದು, ಅದಕ್ಕೆ ವೀಳ್ಯದೆಲೆ ಸುಣ್ಣ ವನ್ನು ಸ್ವಲ್ಪ ಮಿಶ್ರಣ ಮಾಡಿ (ಬಣ್ಣ ಬರುವವರೆಗೆ ) ಅರೆದು ಸಂಜೆ ವೇಳೆಗೆ ಸರಿಯಾಗಿ ಮದರಂಗಿ ಕಾರ್ಯಕ್ರಮ ನಡೆಯುತ್ತಿತ್ತು.

ಮದುವಣಗಿತ್ತಿ ಸೂರ್ಯ ಅಸ್ತ ಮಿಸುವ ಹೊತ್ತಿಗೆ  ಶುಭ್ರಶುಚೀತಳಾಗಿ  ಬಂದು ದೇವರಿಗೆ ದೀಪ ಹಚ್ಚಿ  ತುಳಸೀ ಕಟ್ಟೆಯ ಎದುರೆಗಡೆ  ಹಾಸಿದ  ಹೊಸ ಚಾಪೆಯ ಲ್ಲಿ ಕುಳಿತು ಕೊಳ್ಳುವಳು.

ಮದುವಣಗಿತ್ತಿ ಗೆ ಸಕ್ಕರೆ ಮಿಶ್ರಿತ ಹಾಲು ಕುಡಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡುತ್ತಿದ್ದರು. ಅವಳನ್ನು ರೇಗಿಸುತ್ತಾ, ಅವಳ ಮೊಗದಾವರೆಯನ್ನು ಕೆಂಪಾಗಿಸುತ್ತಾ , ಮದುವೆ ಯ ಬಗೆ ಗಿನ ತಳಮಳ, ತವರು ಬಿಟ್ಟು ಹೋಗುವ ಅವಳ ದುಗುಡ ವನ್ನು ಕಮ್ಮಿ ಮಾಡಲು   ಎಲ್ಲರೂ ಸೇರಿ  ಸಂತೋಷ ದಿಂದ ಈ ಕಾರ್ಯಕ್ರಮವನ್ನು ಆಚರಿಸುತ್ತ್ತಿದ್ದರು.

ಸಿಹಿತಿಂಡಿಗಳು ಹಾಗೂ ಪಾಯಸ ಉಣಬಡಿಸಿ  ಅವರ ಮುಂದಿನ ಜೀವನ ಸಿಹಿ ಸಿಹಿ ಯಾಗಿರಲೆಂದು ಶುಭಹಾರೆಸುತಿದ್ದರು.

ಮದರಂಗಿ   ಬಣ್ಣದ ಗಾಢತೆ ಯ‌ ಮೇಲೆ ಭಾವಿ ದಂಪತಿ ಗಳ ಪ್ರೀತಿ ಎಷ್ಟಿರಬಹುದು ಎಂಬ ಬಗ್ಗೆ ಕೆಲವರು ವೀಶೇಷ ನಂಬಿಕೆ ಇರಿಸಿ ಕೊಂಡಿರುತ್ತಾರೆ.

ಇನ್ನು ಕೆಲವರು ಹೇಳುವಂತೆ ಅತ್ತೆ ಸೊಸೆ ಯ ಪ್ರೀತಿ ಯ ಬಗ್ಗೆಯೂ ಮದರಂಗಿ ತಿಳಿಸುತ್ತದೆ.ಅಲ್ಲದೆ ವೈದ್ಯಕೀಯ ವಾಗಿಯೂ ಮದರಂಗಿ ಎಲೆ ಬಹಳ ಉಪಯುಕ್ತ. ಮದರಂಗಿ ಗೆ ತಂಪು ನೀಡುವ ಗುಣಗಳಿದ್ದು ಅದರಂತೆ ಒತ್ತಡ ಕಡಿಮೆ ಮಾಡುವ ಅಂಶಗಳಿವೆ.

ತಲೆನೋವು ಶಮನ ಮುಂತಾದ  ಔಷಧಿ ಯ ಗುಣಗಳಿಂದ ಪ್ರಸಿದ್ಧ ವಾಗಿದೆ. ಆದರೆ ಈಗಿನ ತಲೆಮಾರಿನ ಜನರು ಸಂಪೂರ್ಣ ವಾಗಿ ಈ ಸಂಪ್ರದಾಯ ವನ್ನು ಬುಡಮೇಲು ಗೊಳಿಸಿದ್ದಾರೆ.

ಮದರಂಗಿ ಎಲೆ ಯ ಬದಲಿಗೆ ಪೇಟೆಯಲ್ಲಿ ಸಿಗುವ ಟ್ಯೂಬ್ , ಪಾಯಸ ಸಿಹಿ ತಿಂಡಿ ಗಳ ಬದಲಿಗೆ ಕಬಾಬ್, ಬಿಯರ್, ವಿಸ್ಕಿ, ಮದರಂಗಿ ಹಚ್ಚಿ ತಲೆ ನೋವು ಕಡಿಮೆ ಮಾಡುವ ಬದಲು , ಇನ್ನೂ ತಲೆ ನೋವು ಜಾಸ್ತಿ ಮಾಡುವ “ಡೀಜೆ, ಕಣ್ಣು ಕುಕ್ಕುವ ಲೈಟಿಂಗ್ಸ್” ಗಳು ಇವೆಲ್ಲವೂ ಮೂಲ ಉದ್ದೇಶಕ್ಕೆ ತದ್ವಿರುದ್ಧವಾಗಿವೆ.

ಕೆಲವರು ಮದರಂಗಿ ದಿನ ಮಾಡುವ ಖರ್ಚು ಪಾಪದವರಿಗೆ  ಆರಾಮವಾಗಿ ಮದುವೆ ಮಾಡಿ ಮುಗಿಸುವ ಖರ್ಚಿ ಗಿಂತ ಹೆಚ್ಚಾಗಿ ರುತ್ತದೆ.ಅವರು ಮಾಡುತ್ತಾರೆ ಎಂದು ಇವರು, ಇವರು ಮಾಡುತ್ತಾರೆ ಎಂದು ಇನ್ನು ಕೆಲವರು,ಹೀಗೆ ಇದು ಫ್ಯಾಷನ್ ಆಗಿ ಬಿಟ್ಟಿದೆ.

ಪಕ್ಕದ ಮನೆಯವರು ವಿಜೃಂಭಣೆಯಿಂದ ಮಾಡಿದ್ದಾರೆ , ನಾವು ಮಾಡದಿದ್ದರೆ ಇದು ನಮ್ಮ ಪ್ರೆಸ್ಟೆಜ್  ಪ್ರಶ್ನೆ. ಎಂದು ಎಷ್ಟು ಕಷ್ಟದಲ್ಲಿ ದ್ದರೂ ಸಾಲ ಮಾಡಿ ಯಾದರೂ  ಗೌಜಿ ಯಲ್ಲೆ   ಮದರಂಗಿ ಕಾರ್ಯಕ್ರಮವನ್ನು  ಮಾಡಿ ಮುಗಿಸುತ್ತಾರೆ.

ಇಂತಾ ಕಾರ್ಯಕ್ರಮ ಗಳಲ್ಲಿ  ತಿನ್ನುವುದಕ್ಕಿಂತ ಕುಡಿದು, ಕುಣಿದು ಆಹಾರ ಪದಾರ್ಥಗಳನ್ನು ಹಾಳು ಮಾಡುವುದೇ ಹೆಚ್ಚು.ಇದರ ಬಗ್ಗೆ ‌ವಿಚಾರವಾದಿಗಳು ಎಷ್ಟು  ಬೊಬ್ಬಿಟ್ಟರೂ ಯಾರೂ ಕೇರ್ ಮಾಡಲೇ ಇಲ್ಲ.

ಆದರೆ ಕಳೆದ ವರ್ಷ ಬಂದ ಕೊರೊನ ಎಂಬ. ಮಹಾಮಾರಿ ಕೆಲವು ಕಡೆ ತುಂಬಾ ನಷ್ಟ ಉಂಟು ಮಾಡಿದರೂ ಇಂತಹ ದುಂದು ವೆಚ್ಚ ಮಾಡುವವರನ್ನು   ಚಿಂತನೆ ಗೆ ಒಳಪಡಿಸಿದೆ.

ಈಗೀಗ ಮಧ್ಯಾಹ್ನ ವೇ ಮೆಹಂದಿ ಶಾಸ್ತ್ರ ಮುಗಿಸುತ್ತಾರೆ.

ಆಗ  ರಾತ್ರಿ ಡಿನ್ನರ್ ಪಾರ್ಟಿ, ಡೀಜೆ , ಲೈಟಿಂಗ್ಸ್ ಗಳಿಗೆ ಅವಕಾಶ ವಿರುವುದಿಲ್ಲ.

ನಿಜವಾಗಿಯೂ ಒಂದರ್ಥದಲ್ಲಿ ಇದು ಒಳ್ಳೆಯ ಬೆಳವಣಿಗೆ.

ಕಾಲಕ್ಕೆ ತಕ್ಕಂತೆ ನಾವೂ ಕೂಡ ಬದಲಾಗಬೇಕು ಎನ್ನುವುದು ಒಪ್ಪತಕ್ಕ ವಿಚಾರ.

ಬದಲಾವಣೆ ಇರಲಿ , ಆದರೆ ನಮ್ಮ ಸಂಪ್ರದಾಯ ವನ್ನು ನಾವು ಕೈ ಬಿಡಬಾರದು ಹಾಗೂ ದುಂದು ವೆಚ್ಚ ಕ್ಕೆ ಕಡಿವಾಣ ಹಾಕಬೇಕು. ಆಗ ಇಂತಹ ಆಚರಣೆಗಳಿಗೊಂದು ಅರ್ಥ ಬರುತ್ತದೆ ..

✍️ ಸತೀಶ್ ಎಮ್ ಶೆಟ್ಟಿ . ಕಣಂಜಾರು.

 

LEAVE A REPLY

Please enter your comment!
Please enter your name here